ಬೆಂ-ಮೈ ಹೆದ್ದಾರಿಯಲ್ಲಿ ರಸ್ತೆ ಸುರಕ್ಷತಾ ಕ್ರಮಗಳಿಗಾಗಿ 688 ಕೋಟಿ ವ್ಯಯಿಸಲು ಕೇಂದ್ರ ನಿರ್ಧಾರ
ನವದೆಹಲಿ: ಸರಣಿ ಅಪಘಾತಗಳ ಬಳಿಕ ಎಚ್ಚೆತ್ತುಕೊಂಡಿರುವ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಪ್ರಾಧಿಕಾರ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರಸ್ತೆ ಸುರಕ್ಷತಾ ಕ್ರಮಗಳಿಗಾಗಿ 688 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲು ನಿರ್ಧರಿಸಿದೆ. ಇತ್ತಿಚೇಗೆ ನಡೆದ ಸಮೀಕ್ಷಾ ವರದಿ ಆಧರಿಸಿ ಅಗತ್ಯ ಕ್ರಮ ಕೈಗೊಳ್ಳಲು ಸರ್ಕಾರದಿಂದ ಬಿಡ್ ಕೂಡಾ ಕರೆಯಲಾಗಿದೆ. ಸಮೀಕ್ಷೆಯ ಸಮಯದಲ್ಲಿ ಕಂಡುಬಂದಿರುವ ಅಪಾಯಕಾರಿ ತಾಣಗಳು, ಗ್ರೇಡಿಯಂಟ್ ಸಮಸ್ಯೆಗಳನ್ನು ಸರಿಪಡಿಸಲು, ರಸ್ತೆಯಲ್ಲಿ ಹೆಚ್ಚಿನ ಬೆಳಕಿಗಾಗಿ ಲೈಟಿಂಗ್ ವ್ಯವಸ್ಥೆ, ಪಾದಾಚಾರಿಗಳಿಗೆ ಮೇಲ್ಸೇತುವೆಗಳು, ಎಚ್ಚರಿಕೆ ಫಲಕಗಳು, ಹೆಡ್‍ಲೈಟ್ ಪ್ರತಿಫಲಕಗಳು, ರಸ್ತೆ ಗುರುತುಗಳು, ಗಾರ್ಡ್ ರೈಲ್‍ಗಳು ಮತ್ತು […]







































































































































































































































































































































































































































































































































































































































































































































































































































































































































































































































































































































