September 15, 2026

ಪದೇ ಪದೇ ಅಮೆರಿಕಕ್ಕೆ ಹೋಗುವುದು ತಪ್ಪೆಂದು ಗೊತ್ತಿದೆ

ಮಂಡ್ಯ: ಪದೇ ಪದೇ ಅಮೇರಿಕಾಕ್ಕೆ ಹೋಗಿ ತಪ್ಪು ಮಾಡುತ್ತಿದ್ದೇನೆ ಎಂದು ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಒಪ್ಪಿಕೊಂಡರು. ಮಂಡ್ಯದಲ್ಲಿ ಮಾತನಾಡಿದ ಅವರು, ಶಾಸಕರಾಗಿ ಆಯ್ಕೆಯಾದ ಏಳು ತಿಂಗಳಲ್ಲಿ ನಾಲ್ಕು ಬಾರಿ ಅಮೇರಿಕಾಗೆ ಹೋಗಿರುವುದು ನಿಜ. ಹೀಗೆ ಮಾಡುವುದು ತಪ್ಪೆಂದು ಗೊತ್ತಿದೆ. ನನ್ನ ಕೆಲವು ವೈಯಕ್ತಿಕ ಸಮಸ್ಯೆಗಳಿವೆ. ಅವುಗಳನ್ನು ಪರಿಹರಿಸಿಕೊಳ್ಳಲು ಹೋಗುತ್ತಿದ್ದೇನೆ ಅಷ್ಟೆ ಎಂದು ಸ್ಪಷ್ಟನೆ ನೀಡಿದರು. ಪದೇ ಪದೇ ಅಮೇರಿಕಾಗೆ ತೆರಳಿದ್ದ ಶಾಸಕರ ಮೇಲೆ ಮತದಾರರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ಕ್ಷೇತ್ರದಲ್ಲಿ ಅವರ ವಿರುದ್ಧ ಅಸಮಾಧಾನ […]

ಬಾಲರಾಮನ ಪ್ರಾಣಪ್ರತಿಷ್ಠಾ ದಿನ ಗೈರಾದ್ರೆ 1 ಸಾವಿರ ಫೈನ್ ಪ್ರಕರಣ- ಶಾಲೆಯ ಪ್ರಾಂಶುಪಾಲರ ಸ್ಪಷ್ಟನೆ ಏನು?

ಚಿಕ್ಕಮಗಳೂರು: ಜಿಲ್ಲೆಯ ಕ್ರೈಸ್ತ ಶಾಲೆಯೊಂದರಲ್ಲಿ ಅಯೋಧ್ಯೆ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆಯ ದಿನ ಗೈರಾದ್ರೆ 1 ಸಾವಿರ ದಂಡ ಹಾಕಲಾಗುವುದು ಎಂಬ ವಿಚಾರ ಇಂದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈ ಬೆನ್ನಲ್ಲೇ ಇದೀಗ ಶಾಲೆಯ ಪ್ರಾಂಶುಪಾಲರು ಸ್ಪಷ್ಟನೆ ಕೊಟ್ಟಿದ್ದು, ಅಯೋಧ್ಯೆಗೂ ಮಕ್ಕಳಿಗೆ ಎಚ್ಚರಿಕೆ ನೀಡಿದ್ದಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. ದಂಡ ಪ್ರಕರಣ: ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ ದಿನ ಯಾರಾದರೂ ಶಾಲೆಗೆ ರಜೆ ಹಾಕಿದ್ರೆ 1,000 ದಂಡ (Fone) ಎಂದು ಚಿಕ್ಕಮಗಳೂರು ನಗರದ ಕ್ರೈಸ್ತ ಶಾಲೆ ಮಕ್ಕಳಿಗೆ ಎಚ್ಚರಿಕೆ ನೀಡಿದೆ ಎನ್ನಲಾಗಿತ್ತು. […]

ಪ್ರಜಾಪ್ರಭುತ್ವಕ್ಕೆ ವಿರೋಧ ಪಕ್ಷ ಬೇಕುದೇಶದ್ರೋಹಿಗಳ ವಿರೋಧ ಪಕ್ಷವಲ್ಲ

ಕಾರವಾರ:ಪ್ರಜಾಪ್ರಭುತ್ವಕ್ಕೆ ವಿರೋಧ ಪಕ್ಷ ಬೇಕೇ ಹೊರತು ದೇಶದ್ರೋಹಿಗಳ ವಿರೋಧ ಪಕ್ಷವಲ್ಲ ಎಂದು ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.ಸಿದ್ದಾಪುರ ತಾಲೂಕಿನ ಕಾನಸೂರಿನಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲಾ ಭಗವಂತನ ಇಚ್ಛೆ. ಇವತ್ತು ದೇಶದಲ್ಲಿ ಏನು ನಡೆಯುತ್ತಿದೆಯೋ ಅವೆಲ್ಲವೂ ಭಗವಂತನ ಇಚ್ಛೆ. ನಾವು ತೀರ್ಮಾನ ಮಾಡಿದ್ದೇನೂ ಇಲ್ಲ, ಜಗತ್ತಿಗೆ ಈ ಭಾರತ ಬೇಕು. ದೇಶಕ್ಕೆ ಬಿಜೆಪಿ ಬೇಕು ಎಂದರು.ಒಮ್ಮೆ ಗೆದ್ದರೆ ಸಾಕಾಗೋದಿಲ್ಲ ಅಂತಿಮದ ತನಕ ನಾವೇ ಗೆಲ್ಲುತ್ತಿರಬೇಕು. ಏನದು ಅಂತಿಮ ಗೆಲುವು ಎಂದರೆ […]

ಅಮೂಲ್ಯ ವೃಕ್ಷಗಳ ಸಂರಕ್ಷಣೆಗೆ ಈಶ್ವರ ಖಂಡ್ರೆ ಕ್ರಮ

ಬೆಂಗಳೂರು:ಮರಗಳ ಅಕ್ರಮ ಕಡಿತ ತಡೆಯಲು ಮತ್ತು ಅಮೂಲ್ಯ ವೃಕ್ಷ ಸಂಪತ್ತು ಉಳಿಸಲು ಸಂಕಲ್ಪ ಮಾಡಿರುವ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರು ಬೀಟೆ, ಶ್ರೀಗಂಧ, ತೇಗದ ಮರಗಳ ಜಿಯೋ ಟ್ಯಾಗ್ ಮಾಡಲು ಸೂಚನೆ ನೀಡಿದ್ದಾರೆ.ಕಾಡನಂಚಿನಲ್ಲಿರುವ ಎಲ್ಲ ಜಮೀನಿನಲ್ಲಿ ಅಂದರೆ ಗ್ರಾಮಗಳಿಗೆ ಹೊಂದಿಕೊAಡ ವನಪ್ರದೇಶ, ಪಟ್ಟಾಭೂಮಿ ಮತ್ತು ಸರ್ಕಾರಿ ಜಮೀನಿನಲ್ಲಿರುವ ಬೀಟೆ (ರೋಸ್ ವುಡ್), ತೇಗ (ಟೀಕ್) ಮತ್ತು ಶ್ರೀಗಂಧ (ರಕ್ತ ಚಂದನ) ಮರಗಳಿಗೆ 3 ತಿಂಗಳ ಅವಧಿಯೊಳಗೆ ಜಿಯೋ ಟ್ಯಾಗ್ ಮಾಡಿ […]

ಮಂತ್ರಾಕ್ಷತೆ ಹಂಚುವ ವೇಳೆ ಹಲ್ಲೆ; ಆರೋಪ

ವಿಜಯಪುರ:ಮನೆ ಮನೆಗೆ ಶ್ರೀರಾಮಮಂದಿರ ಮಂತ್ರಾಕ್ಷತೆ ಹಂಚುವ ವೇಳೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಹಿನ್ನೆಲೆ ಮನೆ ಮನೆಗೆ ಮಂತ್ರಾಕ್ಷತೆ ಹಂಚಿಕೆ ಕಾರ್ಯ ವಿಜಯಪುರದಲ್ಲಿ ನಡೆದಿತ್ತು.ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದಲ್ಲಿ ಮಂತ್ರಾಕ್ಷತೆ ಹಂಚುವ ವೇಳೆ ಹಿಂದೂ ಸಮಾಜದ ಯುವಕರ ಮೇಲೆ ಹಲ್ಲೆ ನಡೆದ ಆರೋಪ ಕೇಳಿಬಂದಿದೆ. ಮಂತ್ರಾಕ್ಷತೆ ಹಂಚುತ್ತಿದ್ದ ಹಿಂದೂಗಳ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದ್ದು, ಪಟ್ಟಣದ ವಾರ್ಡ್ ನಂಬರ್ 8 ರಲ್ಲಿ ಘಟನೆ ನಡೆದಿದೆ. ಈ ವಾರ್ಡ್ನಲ್ಲಿ ಮುಸ್ಲಿಮರು ಅಧಿಕವಾಗಿದ್ದಾರೆ. ಈ ಏರಿಯಾದಲ್ಲಿ […]

ಅನಂತ್‌ಕುಮಾರ್ ಹೆಗಡೆ ಒಬ್ಬ ಹುಚ್ಚ

ಕಾರವಾರ:ಸಂಸದ ಅನಂತ್‌ಕುಮಾರ್ ಹೆಗಡೆ ಒಬ್ಬ ಹುಚ್ಚ. ಅವನಿಗೆ ಸಂಸ್ಕೃತಿ ಇಲ್ಲ. ಅವನ ಬಗ್ಗೆ ಮಾತಾಡಲು ನನಗೆ ಹುಚ್ಚು ಹಿಡಿದಿಲ್ಲ ಎಂದು ಅನಂತ್‌ಕುಮಾರ್ ಹೆಗಡೆ ವಿರುದ್ಧ ಸಚಿವ ಮಧು ಬಂಗಾರಪ್ಪ ಕಿಡಿಕಾರಿದ್ದಾರೆ.ಶಿರಸಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಜನರಿಂದ ಮತ ಪಡೆದು ಜನರಿಗೆ ದ್ರೋಹ ಮಾಡಿದ ಮೊದಲ ವ್ಯಕ್ತಿ ಅನಂತ್‌ಕುಮಾರ್ ಹೆಗಡೆ. ನಾಲ್ಕು ವರ್ಷ ಕೂತ್ಕೊಳೋದು, ಆಮೇಲೆ ಜನರ ವಿಶ್ವಾಸಕ್ಕೆ ಮೋಸ ಮಾಡೋದು. ಪ್ರಜಾಪ್ರಭುತ್ವದ ಬಗ್ಗೆ ವಿರೋಧ ಮಾಡಿದವರಿಗೆ ನಾವು ಧಿಕ್ಕಾರ ಮಾಡಲೇಬೇಕು. ಜನ ಅವನನ್ನು ಬದಲಾವಣೆ ಮಾಡುತ್ತಾರೆ […]

ಕರ್ನಾಟಕದಿಂದ ಅಯೋಧ್ಯೆಗೆ 35 ಸಾವಿರಕ್ಕೂ ರಾಮ ಭಕ್ತರು

ಬೆಂಗಳೂರು:ಕರ್ನಾಟಕದಿಂದ ಅಯೋಧ್ಯೆಗೆ ಜನವರಿ 22ರ ಬಳಿಕ 60 ದಿನಗಳ ಅವಧಿಯಲ್ಲಿ 35 ಸಾವಿರಕ್ಕೂ ಹೆಚ್ಚು ರಾಮ ಭಕ್ತರು ಪ್ರಯಾಣಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ ತಿಳಿಸಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಜನವರಿ 31ರಿಂದ ಮಾರ್ಚ್ 25ರ ವರೆಗೆ ರಾಮ ಭಕ್ತರು ಅಯೋಧ್ಯೆಗೆ ಪ್ರಯಾಣ ಮಾಡಲಿದ್ದಾರೆ. ಪ್ರಯಾಣದ ಖರ್ಚು ವೆಚ್ಚವನ್ನು ಅವರೇ ಭರಿಸಲಿದ್ದಾರೆ. ಪ್ರತಿ ರೈಲಿನಲ್ಲೂ 1500ಜನ ಪ್ರಯಾಣ ಮಾಡಲಿದ್ದು, ಒಟ್ಟು 25 ರೈಲುಗಳ ಮೂಲಕ ಪ್ರಯಾಣ ಮಾಡಲಿದ್ದಾರೆ ಎಂದು ತಿಳಿಸಿದರು.ರಾಮ ಭಕ್ತರ ಉತ್ಸಾಹಕ್ಕೆ […]

ರಾಮಲಲ್ಲಾ ವಿಗ್ರಹ ಕೆತ್ತನೆಗೆ ಬಳಸಿರುವಕಪ್ಪು ಶಿಲೆ ಸಿಕ್ಕ ಜಾಗದಲ್ಲೇ ರಾಮಮಂದಿರ

ಮೈಸೂರು:ನಗರದ ಚಾಮುಂಡೇಶ್ವರಿ ಕ್ಷೇತ್ರದ ಹಾರೋಹಳ್ಳಿ ಗ್ರಾಮದಲ್ಲಿ ಸಿಕ್ಕ ಕಪ್ಪು ಶಿಲೆಯಲ್ಲಿ ಅಯೋಧ್ಯೆಯ ಬಾಲರಾಮನನ್ನು ಕೆತ್ತಲಾಗಿದೆ. ಹೀಗಾಗಿ ಈ ಕಪ್ಪು ಶಿಲೆ ಸಿಕ್ಕ ಜಾಗದಲ್ಲೇ ಶ್ರೀರಾಮ ದೇವಸ್ಥಾನ ಕಟ್ಟುವ ನಿರ್ಧಾರ ಮಾಡಲಾಗಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.ಅಯೋಧ್ಯೆಯ ಬಾಲರಾಮನ ಕೆತ್ತನೆಗೆ ಬಳಕೆಯಾದ ಕಪ್ಪು ಶಿಲೆ ಸಿಕ್ಕ ಜಮೀನಿನಲ್ಲಿ ಶ್ರೀರಾಮ ಮಂದಿರ ಕಟ್ಟುವ ನಿರ್ಧಾರ ಮಾಡಲಾಗಿದೆ. ಜನವರಿ 22 ರಂದು ಬೆಳಗ್ಗೆ ಈ ದೇವಸ್ಥಾನದ ಭೂಮಿಪೂಜೆ ನಡೆಯಲಿದೆ ಎಂದು ಶಾಸಕರು ಸ್ಪಷ್ಟಪಡಿಸಿದ್ದಾರೆ.ಜಾಗ ಸಿಕ್ಕ ಸ್ಥಳದ 4 ಗುಂಟೆ ಜಮೀನನ್ನು ಮಂದಿರ […]

ರಾಜ್ಯಪಾಲರ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ

ಬೆಂಗಳೂರು:ರಾಜ್ಯದಲ್ಲಿ ಗೋಧ್ರಾ ರೀತಿ ಘಟನೆ ಆಗುತ್ತೆಂದು ಹೇಳಿಕೆ ಹಿನ್ನೆಲೆ ಸಿಸಿಬಿ ಅಧಿಕಾರಿಗಳಿಂದ ಒಐಅ ಹರಿಪ್ರಸಾದ್ ವಿಚಾರಣೆ ವಿಚಾರಕ್ಕೆ ಸಂಬAಧಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ. ನೀವು ಗಮನಿಸಬೇಕು, ಯಾರು ನಿರ್ದೇಶನ ಮಾಡುತ್ತಿದ್ದಾರೆ. ರಾಜ್ಯಪಾಲರು ಪದೇಪದೆ ಇದರ ಬಗ್ಗೆ ಕೇಳ್ತಿದ್ದಾರೆ. ಇದು ತನಿಖೆ ಆಗ್ತಿದೆಯಾ? ಇಲ್ಲವಾ ಎಂದು ಪದೇಪದೆ ಕೇಳುತ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಜ್ಯಪಾಲರಾದ ಗೆಹ್ಲೋಟ್ ಅವರು ಒತ್ತಡ ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ.ರಾಜ್ಯಪಾಲರ ಮಾತಿಗೆ […]

ಪಿಎಸ್‌ಐ, ಸಿಟಿಐ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಅಕ್ರಮ ನಡೆದಿದ್ದರೆ ಕ್ರಮ

ಬೆಂಗಳೂರು:ಪಿಎಸ್‌ಐ, ಸಿಟಿಐ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬAಧಿಸಿದAತೆ ಪ್ರಕರಣದ ತನಿಖೆಯನ್ನು ಸಿಸಿಬಿ ನಡೆಸುತ್ತಿದೆ. ಅಕ್ರಮ ನಡೆದಿದ್ದರೇ ಕ್ರಮ ತೆಗೆದುಕೊಳ್ಳುತ್ತೇವೆ. ಮುಂಜಾಗ್ರತಾ ಕ್ರಮ ಕೈಗೊಂಡು ಪಿಎಸ್‌ಐ ನೇಮಕ ಪರೀಕ್ಷೆ ಮಾಡುತ್ತೇವೆ. ಬೆಂಗಳೂರು ಕೇಂದ್ರದಲ್ಲೇ ಪಿಎಸ್‌ಐ ನೇಮಕಾತಿ ಪರೀಕ್ಷೆ ನಡೆಸಲಾಗುತ್ತದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಪ್ರಕರಣ ಸಂಬAಧ ಗುಪ್ತಚರ ಇಲಾಖೆ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ. ಮಾಹಿತಿ ಪಡೆಯುವಾಗ ಆಡಿಯೋ ಬೆಳಕಿಗೆ ಬಂದಿದೆ. ಮಾಹಿತಿ ಕಲೆ ಹಾಕಲು ಫೇಕ್ ಆಡಿಯೋ […]