ಯುದ್ಧ ಸ್ಮಾರಕಕ್ಕೆ ತೆರಳಿ ಹುತಾತ್ಮ ಯೋಧರಿಗೆ ಪ್ರಧಾನಿ ಮೋದಿ ಗೌರವ
ನವದೆಹಲಿ: 75ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ತೆರಳಿ ಮಡಿದ ವೀರರಿಗೆ ಗೌರವ ಸಲ್ಲಿಸಿದರು.
ಇಂದು ಬೆಳಗ್ಗೆ ಮೋದಿ ಅವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದರು. ಮಡಿದ ವೀರಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಮೋದಿ ಮತ್ತು ಇತರ ಗಣ್ಯರು ಮೆರವಣಿಗೆಯನ್ನು ವೀಕ್ಷಿಸಲು ಕರ್ತವ್ಯ ಪಥದಲ್ಲಿನ ವೇದಿಕೆಗೆ ತೆರಳಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಅವರ ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರ ಆಗಮಿಸಿದ ವೇಳೆ ರಾಷ್ಟ್ರಪತಿಗಳ ಅಂಗರಕ್ಷಕರು ಬೆಂಗಾವಲು ನೀಡಿದ್ದಾರೆ. ರಾಷ್ಟ್ರಪತಿಗಳ ಅಂಗರಕ್ಷಕ ಭಾರತೀಯ ಸೇನೆಯ ಅತ್ಯಂತ ಹಿರಿಯ ರೆಜಿಮೆಂಟ್ ಆಗಿದೆ. ಅಂಗರಕ್ಷಕ್ 1773 ರಲ್ಲಿ ಸ್ಥಾಪನೆಯಾದಾಗಿನಿಂದ 250 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದೆ. ಇನ್ನು ಸುಮಾರು 40 ವರ್ಷಗಳ ಬಳಿಕ ಈ ಬಾರಿ ಕರ್ತವ್ಯ ಪಥದಲ್ಲಿ ರಾಷ್ಟ್ರಪತಿಯವರು ಸಾರೋಟಿನಲ್ಲಿ ಬಂದಿಳಿದಿದ್ದಾರೆ.
ದೇಶೀಯ ಗನ್ ಸಿಸ್ಟಮ್ 105-ಎಂಎಂ ಇಂಡಿಯನ್ ಫೀಲ್ಡ್ ಗನ್‌ಗಳೊಂದಿಗೆ ನೀಡಲಾದ 21-ಗನ್ ಸೆಲ್ಯೂಟ್‌ನೊಂದಿಗೆ ರಾಷ್ಟ್ರಗೀತೆಯ ನಂತರ ಧ್ವಜಾರೋಹಣ ಮಾಡಲಾಯಿತು. 105 ಹೆಲಿಕಾಪ್ಟರ್ ಘಟಕದ ನಾಲ್ಕು Mi-17 IV ಹೆಲಿಕಾಪ್ಟರ್‌ಗಳು ಕರ್ತವ್ಯ ಪಥದಲ್ಲಿರುವ ಪ್ರೇಕ್ಷಕರ ಮೇಲೆ ಹೂವಿನ ಸುರಿಮಳೆ ಸುರಿಸಿದವು. ಬಳಿಕ 100 ಕ್ಕೂ ಹೆಚ್ಚು ಮಹಿಳಾ ಕಲಾವಿದರು ವಿವಿಧ ರೀತಿಯ ತಾಳವಾದ್ಯಗಳನ್ನು ನುಡಿಸುವ ‘ಆವಾಹನ್’ ಬ್ಯಾಂಡ್ ಪ್ರದರ್ಶನ ನೀಡಿದ್ದು, ಇದು ನಾರಿ ಶಕ್ತಿಯನ್ನು ಸಂಕೇತಿಸಿದೆ.













































































































































































































































































































































































































































































































































































































































































































































































































































































































































































































































































































































