ಲೋಕಸಮರಕ್ಕೆ ಕಾಂಗ್ರೆಸ್- ಬಿಜೆಪಿ ತಯಾರಿ
ಬೆಂಗಳೂರು:
ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಮತ್ತು ಬಿಜೆಪಿ ಭಾರೀ ತಯಾರಿ ಆರಂಭಿಸಿಕೊAಡಿವೆ. ಎರಡೂ ಪಕ್ಷಗಳು ಸಂಘಟನೆಗೆ ಮುಂದಾಗಿದ್ದು, ಸಭೆಗಳನ್ನು ನಡೆಸುತ್ತಿವೆ. ಲೋಕಸಭಾ ಚುನಾವಣೆ ಸಿದ್ಧತೆ ಕುರಿತು ವಿವಿಧ ಹಂತದ ರಾಜ್ಯ ಕಾಂಗ್ರೆಸ್ ನಾಯಕರೊಂದಿಗೆ ಪ್ರತ್ಯೇಕ ಸಭೆ ನಡೆಸಲು ಕಾಂಗ್ರೆಸ್ ಉಸ್ತುವಾರಿ ರಣ್‌ದೀಪ್ ಸಿಂಗ್ ಸುರ್ಜೆವಾಲ ಬೆಂಗಳೂರಿಗೆ ಬರುತ್ತಿದ್ದಾರೆ. ನಾಳೆ ಹಾಗೂ ನಾಡಿದ್ದು ಕಾಂಗ್ರೆಸ್‌ನಿAದ ಲೋಕಸಭೆ ತಂತ್ರಗಾರಿಕೆ ಸಭೆ ನಡೆಯಲಿದೆ.
ನಾಳೆ ಕಾಂಗ್ರೆಸ್ ಹಿರಿಯ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ. ನಾಡಿದ್ದು ಕಾಂಗ್ರೆಸ್ ಶಾಸಕರು, ವಿಧಾನಪರಿಷತ್ ಸದಸ್ಯರು, ಸಚಿವರೊಂದಿಗೆ ಸಭೆ ನಡೆಯಲಿದೆ.
ಇನ್ನು ನಿಗಮ ಮಂಡಳಿ ಅಧ್ಯಕ್ಷರ ನೇಮಕದ ವೇಳೆ ಕಾರ್ಯಕರ್ತರಿಗೆ ಅವಕಾಶ ಕೊಡೋ ಬಗ್ಗೆಯೂ ರಾಜ್ಯ ನಾಯಕರ ಜೊತೆ ಸುರ್ಜೇವಾಲಾ ಚರ್ಚಿಸಲಿದ್ದಾರೆ.
ಶಾಸಕರ ಜೊತೆಗೆ ಕಾರ್ಯಕರ್ತರಿಗೂ ಅವಕಾಶ ನೀಡುವಂತೆ ಹೈಕಮಾಂಡ್ ಸೂಚಿಸಿರುವ ಹಿನ್ನೆಲೆ ಆದಷ್ಟು ಬೇಗ ಕಾರ್ಯಕರ್ತರನ್ನು ಸೂಚಿಸುವ ಕುರಿತು ಸುರ್ಜೆವಾಲ ಮಾರ್ಗದರ್ಶನ ನೀಡೋ ಸಾಧ್ಯತೆ ಇದೆ.
2024ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ತಯಾರಿ ನಡೆಸಿದೆ. ಲೋಕಸಭಾ ಕ್ಷೇತ್ರವಾರು ಸಂಯೋಜಕರನ್ನ ನಿಯೋಜನೆ ಮಾಡಲಾಗಿದೆ.
ಇಂದು ಬಿಜೆಪಿ ಸಭೆ:
2024ರ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಇಂದು ರಾಜ್ಯ ಬಿಜೆಪಿಯ ಮಹತ್ವದ ಸಭೆ ನಡೆಯಲಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ಲೋಕಸಭಾ ಚುನಾವಣಾ ಯೋಜನಾ ಸಭೆ ನಡೆಯಲಿದ್ದು, ಯಲಹಂಕ ಬಳಿಯ ದೊಡ್ಡಬಳ್ಳಾಪುರ ರಸ್ತೆಯ ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಬಿ.ವೈ. ವಿಜಯೇಂದ್ರ, ಯಡಿಯೂರಪ್ಪ, ಆರ್. ಅಶೋಕ್ ಉಪಸ್ಥಿತಿ ಇರಲಿದ್ದಾರೆ.
ಹೆಚ್‌ಡಿಡಿ ನಿವಾಸಕ್ಕೆ ಸಚಿವ ಅರ್ಜುನ್ ಮುಂಡ ಭೇಟಿ
ಮಾಜಿ ಪ್ರಧಾನಿ ದೇವೇಗೌಡರನ್ನು ಕೇಂದ್ರ ಸಚಿವ ಅರ್ಜುನ್ ಮುಂಡ ಭೇಟಿ ಮಾಡಿದ್ರು. ಭೇಟಿ ಬಳಿಕ ಕುಮಾರಸ್ವಾಮಿ ಮಾತಾಡಿದ್ರು. ನಾನು ಕೇಂದ್ರ ಸಚಿವ ಸ್ಥಾನದ ಬಗ್ಗೆ ಚಿಂತೆ ಮಾಡಿಲ್ಲ. 28ಕ್ಕೆ 28 ಸ್ಥಾನವನ್ನು ಗೆಲ್ಲಬೇಕು ಎಂಬುದಷ್ಟೇ ನಮ್ಮ ಯೋಚನೆ ಎಂದಿದ್ದಾರೆ.
ಕಾAಗ್ರೆಸ್ ನಾಯಕರ ದುರಹಂಕಾರ ತಡೆಯಬೇಕಷ್ಟೇ. ವಿರೋಧಿಗಳಿಗೂ ಸಹ ದೇವೇಗೌಡ ಎಂದೂ ಶಾಪ ಕೊಟ್ಟವರಲ್ಲ. ಈಗಿನ ಕಾಂಗ್ರೆಸ್ ಅಧ್ಯಕ್ಷರು ಕಾಂಗ್ರೆಸ್ ೧೩೫ ವರ್ಷಗಳ ಇತಿಹಾಸದ ಪಕ್ಷ ಅಂದಿದ್ದಾರಲ್ಲ. ಇವರ ಈಗಿನ ಇತಿಹಾಸ ಏನು ಅಂತಾ ಕಿಡಿಕಾರಿದ್ದಾರೆ.













































































































































































































































































































































































































































































































































































































































































































































































































































































































































































































































































































































