November 8, 2025
#ಜಿಲ್ಲೆ

ಶ್ರೀಕಾಂತ್ ಪೂಜಾರಿಗೆ ರೌಡಿಶೀಟರ್‌ನಿಂದ ಮುಕ್ತಿ ಕೊಟ್ಟಿದ್ದು ನಮ್ಮ ಸರ್ಕಾರ

ಹುಬ್ಬಳ್ಳಿ:
ಕರಸೇವಕ ಶ್ರೀಕಾಂತ್ ಪೂಜಾರಿ ಮೇಲಿನ ರೌಡಿಶೀಟರ್ ಕೇಸ್‌ಗೆ ಮುಕ್ತಿ ಕೊಟ್ಟಿದ್ದೇ ಕಾಂಗ್ರೆಸ್ ಸರ್ಕಾರ. ಈಗ ಕೋರ್ಟ್ ಆದೇಶ ಇದ್ದಿದ್ದರಿಂದ ಆತನನ್ನು ಬಂಧಿಸಲಾಗಿತ್ತು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಶ್ರೀಕಾಂತ್ ಪೂಜಾರಿ ಹೆಸರಿನಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಶ್ರೀಕಾಂತ್ ಪೂಜಾರಿ ಹೆಸರಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ನಮಗೆ ಶ್ರೀಕಾಂತ್ ಪೂಜಾರಿ ಯಾgರು ಎನ್ನುವುದೇ ಗೊತ್ತಿಲ್ಲ. ಆತನಿಗಾಗಿ ಸುಮ್ಮನೆ ರಾಜ್ಯಾದ್ಯಂತ ಹೋರಾಟ ಮಾಡುತ್ತಿದ್ದಾರೆ. ಕೇಂದ್ರದಿAದ ಬರುವ ಜಿಎಸ್‌ಟಿಯ ಬಂದಿಲ್ಲ, ಆ ಹಣಕ್ಕಾಗಿ ಹೋರಾಟ ಮಾಡಬೇಕು. ಮೋದಿ ಸರ್ಕಾರದಿಂದ ನಮಗೆ ಅನ್ಯಾಯ ಆಗಿದೆ ಎಂದು ಅವರು ಕುಟುಕಿದ್ದಾರೆ. ರಾಮಮಂದಿರ ಉದ್ಘಾಟನೆ ಆಗುತ್ತಿರುವುದು ಸಂತೋಷದ ವಿಚಾರವಾಗಿದೆ. ಪ್ರತಿ ಗ್ರಾಮದಲ್ಲೂ ರಾಮ ಮಂದಿರ ಇವೆ, ಹಿಂದುತ್ವ ಒಬ್ಬರ ಆಸ್ತಿ ಅಲ್ಲ. ಹಿಂದುತ್ವಕ್ಕೆ ಅನೇಕ ಇತಿಹಾಸ ಇದೆ. ಹಿಂದುತ್ವ ಯಾವ ಪಕ್ಷದ ಆಸ್ತಿಯೂ ಅಲ್ಲ ಎಂದಿದ್ದಾರೆ.
ಕೋವಿಡ್ ವಿಚಾರವಾಗಿ, ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹೆಚ್ಚು ಕೋವಿಡ್ ಟೆಸ್ಟಿಂಗ್ ಮಾಡಲಾಗುತ್ತಿದೆ. ಸಹಜವಾಗಿ ಸ್ವಲ್ಪ ಕೇಸ್ ಜಾಸ್ತಿ ಆಗಿವೆ. ಸುಮಾರು ೭ ಸಾವಿರ ಟೆಸ್ಟಿಂಗ್ ಮಾಡುತ್ತಿದ್ದೇವೆ. ಈ ಬಗ್ಗೆ ಜನ ಆತಂಕ ಪಡುವ ಅಗತ್ಯ ಇಲ್ಲ. ಸ್ವಲ್ಪ ವಯಸ್ಸಾದವರು ಹಾಗೂ ಬೇರೆ ಅನಾರೋಗ್ಯ ಸಮಸ್ಯೆ ಇದ್ದವರು ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ.
ಇದೇ ವೇಳೆ ಹುಬ್ಬಳ್ಳಿ ಸರ್ಕೀಟ್ ಹೌಸ್ ಬಳಿ ಸಚಿವರ ಎದುರಲ್ಲಿ ನರ್ಸ್ ಒಬ್ಬರು ರಂಪಾಟ ಮಾಡಿದ ಘಟನೆ ಸಹ ನಡೆದಿದೆ. ಶಾಸಕ ಪ್ರಸಾದ್ ಅಬ್ಬಯ್ಯ ವೈಯಕ್ತಿಕ ದ್ವೇಷ ಸಾಧಿಸುತ್ತಿದ್ದಾರೆ. ಶಾಸಕರ ಸಹೋದರ ಮಂಜುನಾಥ್ ಅವರ ಮಾತು ಕೇಳದ್ದಕ್ಕೆ ವರ್ಗಾವಣೆ ಮಾಡಿಸಿದ್ದಾರೆ. ಕಿಮ್ಸ್ನಲ್ಲಿ ನರ್ಸಿಂಗ್ ಸುಪರಿಂಟೆAಡೆAಟ್ ಆಗಿದ್ದ ತನ್ನನ್ನು ಗರಗ ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ವರ್ಗಾವಣೆ ಮಾಡಲಾಗಿದೆ. ಕಳೆದ ನಾಲ್ಕು ತಿಂಗಳಿAದ ಸಂಬಳ ಆಗಿಲ್ಲ ಎಂದು ನರ್ಸ್ ಸುನಿತಾ ನಾಯ್ಕ ಸಚಿವರ ಎದುರು ಗೋಳಾಡಿದ್ದಾರೆ. ಈ ವೇಳೆ ಸಚಿವರು ಯಾವುದೇ ಪ್ರತಿಕ್ರಿಯೆ ನೀಡದೆ ತೆರಳಿದ್ದಾರೆ.

Leave a comment

Your email address will not be published. Required fields are marked *