November 8, 2025
#ಬೆಂಗಳೂರು

ಡಿಕೆಶಿ ಹಸ್ತಕ್ಷೇಪಕ್ಕೆ ಸತೀಶ್ ಕಿಡಿ – ಕಾಂಗ್ರೆಸ್‌ಗೂ ಬೆಳಗಾವಿ ರಾಜಕೀಯ ಕಂಟಕನಾ?

ಬೆಂಗಳೂರು: ಬೆಳಗಾವಿಯಲ್ಲಿ ರಾಜಕಾರಣ ಬೆಂಕಿ ಉರಿದಾಗ ಅನಾಹುತವೇ ನಡೆದಿದೆ. ಈ ಬಾರಿಯೂ ಏನಾದರೊಂದು ರಾಜಕೀಯ ಅವಘಡಕ್ಕೆ ಸುಳಿವು ಕೊಡುತ್ತಿದ್ಯಾ ಕುಂದಾನಗರಿ ಪವರ್ ಪಾಲಿಟಿಕ್ಸ್ ಎಂಬ ಅನುಮಾನ ಈಗ ಶುರುವಾಗಿದೆ.

https://imasdk.googleapis.com/js/core/bridge3.595.0_en.html#goog_1432026728

ಹಿಂದಿನ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರಕ್ಕೆ ಬೆಳಗಾವಿ ರಾಜಕಾರಣ ಮುಳುವಾಗಿತ್ತು. ಈಗ ಮತ್ತೊಮ್ಮೆ ರಾಜಕಾರಣ ಗರಿಗೆದರಿದ್ದು, ಇಬ್ಬರು ಪ್ರಭಾವಿ ಸಚಿವರ ಮಧ್ಯೆ ಕಿತ್ತಾಟ ಈಗ ಭುಗಿಲೆದ್ದಿದೆ.

ಸಚಿವ ಸತೀಶ್ ಜಾರಕಿಹೊಳಿ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಪವರ್ ಪ್ರತಿಷ್ಠೆ ಶುರುವಾಗಿದೆ. ಜಿಲ್ಲೆ ಮೇಲಿನ ತಮ್ಮ ಪ್ರಭಾವ, ಹಿಡಿತ ಕಮ್ಮಿ ಮಾಡಲು ಹುನ್ನಾರ ಮಾಡಿದ್ದಾರೆಂದು ಸತೀಶ್ ಜಾರಕಿಹೊಳಿ ಆರೋಪ ಮಾಡಿದ್ದಾರೆ.

ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಹೊರಗಿನವರ ಹಸ್ತಕ್ಷೇಪ ಎಂದು ಡಿಕೆಶಿಗೂ ಠಕ್ಕರ್ ಕೊಟ್ಟಿದ್ದಾರೆ. ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷರ ನೇಮಕ ವಿಚಾರದಲ್ಲಿ ಕಡೆಗಣನೆ ಮಾಡಿದ್ದಲ್ಲದೇ ನಿಗಮ ಮಂಡಳಿ ಸದಸ್ಯ ಸ್ಥಾನದಲ್ಲಿ ತಮ್ಮ ಬೆಂಬಲಿಗರಿಗೆ ಕೊಕ್ ನೀಡಿದ್ದಾರೆ. ಅಧಿಕಾರಿಗಳ ವರ್ಗಾವಣೆ ವಿಚಾರವಾಗಿ ಜಟಾಪಟಿ ನಡೆದಿದ್ದು, ಈ ಎಲ್ಲಾ ಕಾರಣದಿಂದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮುನಿಸಿಕೊಂಡಿದ್ದಾರೆ.  

ಸತೀಶ್ ಜಾರಕಿಹೊಳಿ ಬಣ ವರ್ಸಸ್ ಲಕ್ಷ್ಮಿ ಹೆಬ್ಬಾಳ್ಕರ್ ಬಣದ ಮಧ್ಯೆ ಪರಸ್ಪರ ವೈಯಕ್ತಿಕ ಪ್ರತಿಷ್ಠೆ, ಜಿದ್ದಾಜಿದ್ದಿ ಏರ್ಪಟ್ಟಿದೆ. ಡಿಕೆಶಿ ಕೂಡಾ ಮತ್ತೊಮ್ಮೆ ಬೆಳಗಾವಿ ರಾಜಕೀಯದಲ್ಲಿ ಹಸ್ತಕ್ಷೇಪಕ್ಕೆ ಸತೀಶ್ ಜಾರಕಿಹೊಳಿ ಬೇಸರ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಯಾವುದೇ ಸರ್ಕಾರ ಬಂದರೂ ಸಾಹುಕಾರ್ ಬ್ರದರ್ಸ್ ಆಟ ಇದ್ದಿದ್ದೇ. ಸತೀಶ್, ರಮೇಶ್ ಹಾಗೂ ಬಾಲಚಂದ್ರ ಜಾರಕಿಹೊಳಿ ದಾಳಗಳಿಗೆ ಸರ್ಕಾರಗಳಲ್ಲಿ ತಲ್ಲಣ ಸೃಷ್ಟಿಸಿದೆ ಸಾಹುಕಾರ್ ಸಹೋದರರ ಮೇಲಾಟದ ಬಿಸಿ ಯಡಿಯೂರಪ್ಪ, ಸಿದ್ದರಾಮಯ್ಯ ಹಾಗೂ ಹೆಚ್‌ಡಿಕೆಗೆ ಸರಿಯಾಗಿಯೇ ತಾಕಿದೆ. ಈಗ ಲೋಕಸಭೆ ಚುನಾವಣೆ ಹೊತ್ತಿಗೆ ಸಿದ್ದರಾಮಯ್ಯ ಸರ್ಕಾರಕ್ಕೂ ಗಂಡಾಂತರ ಆಗುತ್ತಾ ಎಂಬ ಚರ್ಚೆ ನಡೆಯುತ್ತಿದೆ.

ಸತೀಶ್- ಲಕ್ಷ್ಮಿ ಜಟಾಪಟಿ ಯಾವುದೋ ರಾಜಕೀಯ ಅವಘಡಕ್ಕೆ ಸುಳಿವು ಕೊಡುತ್ತಿದೆ ಎಂಬ ಗುಮಾನಿ ಹಲವರದ್ದು. ಕುಂದಾನಗರಿ ಪವರ್ ಪಾಲಿಟಿಕ್ಸ್ ಐದೇ ತಿಂಗಳಲ್ಲಿ ಸಿದ್ದರಾಮಯ್ಯ ಸರ್ಕಾರಕ್ಕೆ ಡೇಂಜರ್ ಅಲಾರಂ ಆಗುವ ಲಕ್ಷಣ ತೋರಿಸುತ್ತಿದೆ.

Leave a comment

Your email address will not be published. Required fields are marked *