November 8, 2025
#ಬೆಂಗಳೂರು

ಇದು ಪ್ರಿ ಅರೇಂಜ್ ಮ್ಯಾರೇಜ್


ಬೆಂಗಳೂರು: ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರ ನನ್ನ ಜೊತೆ ಚರ್ಚೆ ಮಾಡಿಲ್ಲ ಅಂತ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಮತ್ತೊಮ್ಮೆ ಜೆಡಿಎಸ್ ನಾಯಕರ ವಿರುದ್ಧ ತಿರುಗಿ ಬಿದ್ದಿದ್ದಾರೆ.

https://imasdk.googleapis.com/js/core/bridge3.594.0_en.html#goog_1555292549

ಮೈತ್ರಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಮೈತ್ರಿ ಮಾಡಿಕೊಂಡವರು ಹೇಳಬೇಕು. ಬಿಜೆಪಿ ಸಿದ್ದಾಂತ ಒಪ್ಪಿ ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತಿದೆಯಾ? ಅಥವಾ ಜೆಡಿಎಸ್ ಸಿದ್ದಾಂತವನ್ನು ಬಿಜೆಪಿ ಒಪ್ಪಿದೆಯೋ? ಕುವೆಂಪು ಪಠ್ಯವನ್ನು ಕೈಬಿಟ್ಟಾಗ ಪ್ರತಿಭಟನೆ ನಾವು ಮಾಡಿದ್ದೆವು. ಈ ಬಗ್ಗೆ ಮೈತ್ರಿ ಆಗೋವಾಗ ಚರ್ಚೆ ಮಾಡಿದ್ದೀರಾ. ಜಾತ್ಯಾತೀತ, ಸಮಾಜವಾದ ಪದವನ್ನ ಸಂವಿಧಾನದಿಂದ ತೆಗೆಯಲಾಗಿದೆ. ಇದರ ಬಗ್ಗೆ ಹಾಗೂ ಸಿಎಎ-ಎನ್‍ಆರ್‍ಸಿ ಬಗ್ಗೆ ಮೈತ್ರಿ ವೇಳೆ ಚರ್ಚೆ ಮಾಡಿದ್ದೀರಾ ಅಂತ ಪ್ರಶ್ನೆ ಮಾಡಿದ್ರು.

ಮೈತ್ರಿಗೆ ಬಹುತೇಕ ಶಾಸಕರು, ಕಾರ್ಯಕರ್ತ ವಿರೋಧ ಇದೆ. ಕೇರಳ, ಮಹಾರಾಷ್ಟ್ರ ಸೇರಿದಂತೆ ಹಲವು ಘಟಕಗಳಿಂದ ವಿರೋಧ ಇದೆ. ರಾಜ್ಯ ಘಟಕಗಳು ಹೀಗೆ ವಿರೋಧ ಮಾಡಿದ್ರೆ ಪಕ್ಷದ ಚಿಹ್ನೆ ಉಳಿಯುತ್ತಾ ಅಂತ ಪ್ರಶ್ನೆ ಮಾಡಿದ್ರು. ಅಕ್ಟೋಬರ್ 16ಕ್ಕೆ ಸಭೆ ಕರೆದಿದ್ದೇನೆ. ಅಲ್ಲಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಅಂದರು. ಪಕ್ಷದಲ್ಲಿ ಕೆಲವು ಆಗದ ಘಟನೆಗಳನ್ನ ಸಹಿಸಿಕೊಂಡು ವಿಷಕಂಠನಾಗಿದ್ದೇನೆ ಅಂತ ವರಿಷ್ಠರ ಮೇಲೆ ಅಸಮಾಧಾನ ಹೊರ ಹಾಕಿದ್ರು. 

ಮುಸ್ಲಿಂ ಮತ ಜೆಡಿಎಸ್ ಗೆ ಬಂದಿಲ್ಲ ಎಂಬ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ಕೊಟ್ಟ ಅವರು, 20% ಮುಸ್ಲಿಂ ವೋಟ್ ಬಂದಿದೆ. ಮುಸ್ಲಿಂ ವೋಟ್ ಬಾರದೇ ಇದ್ದಿದ್ದರೆ 19 ಸೀಟಿನಲ್ಲಿ ಕೇವಲ 2 ಸೀಟು ಮಾತ್ರ ಬರುತ್ತಿತ್ತು ಎಂದರು. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅವರು ನಮ್ಮನ್ನ ಮುಗಿಸಿದ್ರು. ಅಂತಹವರ ಜೊತೆ ಮೈತ್ರಿ ಬೇಕಾ? ಈ ಮೈತ್ರಿ ಲೋಕಸಭೆಗೆ ಮಾತ್ರವೋ, ಸ್ಥಳೀಯ ಸಂಸ್ಥೆಗೆ ಇರಲಿದೆಯೋ ಅದನ್ನ ಮೊದಲು ಹೇಳಬೇಕು. ಬಿಜೆಪಿ ಜಾತ್ಯಾತೀತ ತತ್ವ ಒಪ್ಪುತ್ತಾ? ದೇವೇಗೌಡರು ನಮ್ಮ ನಾಯಕ ಅಂತ ಒಪ್ಪುತ್ತಾ ಮೊದಲು ಹೇಳಲಿ ಅಂತ ಆಗ್ರಹ ಮಾಡಿದ್ರು. ಮೈತ್ರಿ ಆಗಿ ಈಗ ಮದುವೆ ಆಗಿದೆ. ಮದುವೆ ಬಹಿರಂಗ ಆಗಿಲ್ಲ. ಇದು ಪ್ರಿ ಅರೇಂಜ್ ಮ್ಯಾರೇಜ್. ಹೀಗಾಗಿ ಮೈತ್ರಿ ಪಡೆಯಿರಿ ಅಂತ ಸಲಹೆ ಕೊಟ್ರು.

ಜೆಡಿಎಸ್ ಮೈತ್ರಿ ಮಾಡಿಕೊಳ್ಳದೆ ಹೋದ್ರು 3 ಸ್ಥಾನ ಗೆಲ್ಲುತ್ತದೆ ಎಂದರು. ಇಬ್ರಾಹಿಂ ರನ್ನ ನಾವು ಪಕ್ಷಕ್ಕೆ ಕರೆದಿಲ್ಲ ಎಂಬ ಕುಮಾರಸ್ವಾಮಿ ಹೇಳಿಕೆಗೆ ಟಾಂಗ್ ಕೊಟ್ಟ ಅವರು, ಕುಮಾರಸ್ವಾಮಿ ಎಷ್ಟು ಸಾರಿ ನಮ್ಮ ಮನಗೆ ಬಂದಿದ್ದರು ಎಲ್ಲಿರಿಗೆ ಗೊತ್ತಿದೆ ಅಂತ ತಿರುಗೇಟು ಕೊಟ್ರು. ದೇವೇಗೌಡ ಮತ್ತು ಕುಮಾರಸ್ವಾಮಿ ಮೇಲೆ ನನಗೆ ನಂಬಿಕೆ ಇದೆ. ಮೈತ್ರಿ ವಾಪಸ್ ಪಡೆಯುತ್ತಾರೆ ಅಂತ. ವಾಪಸ್ ಪಡೆಯದೇ ಹೋದ್ರೆ ಮುಂದಿನ ತೀರ್ಮಾನ ಜನರನ್ನ ಕೇಳಿ ಮಾಡ್ತೀನಿ ಎಂದರು. ಕಾಂಗ್ರೆಸ್ ಗೆ ಹೋಗೋ ಮನಸು ಇಲ್ಲ. ಚುನಾವಣೆಗೂ ನಿಲ್ಲೋದಿಲ್ಲ. ಆದರು ಶರತ್ ಪವರ್,ನಿತೀಶ್ ಕುಮಾರ್ ಮಾತಾಡಿದ್ದು, ಯಾವುದೇ ತೀರ್ಮಾನ ಮಾಡಿಲ್ಲ ಎಂದರು.

Leave a comment

Your email address will not be published. Required fields are marked *